
ಪಡುಬಿದ್ರಿ: ಹಿರಿಯರು ಉಳಿಸಿಕೊಂಡು ಬಂದ ಸಂಸ್ಕೃತಿಯನ್ನು ಯುವಜನತೆ ಉಳಿಸಬೇಕು ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಕರೆ ನೀಡಿದ್ದಾರೆ.
ಅವರು ಹೆಜಮಾಡಿ ಕೋಡಿಯ ಗಾಂಧಿನಗರ ಯುವಕ, ಯುವತಿ ವೃಂದದ ವತಿಯಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಸಂಸ್ಕೃತಿ-ಸ್ಪುರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈಚಿನ ದಿನಗಳಲ್ಲಿ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದರಿಂದ ಭಾರತೀಯ ಸಂಸ್ಕೃತಿಯ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಉಳಿವು ಅಗತ್ಯ. ಯವಜನತೆ ಈ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗ ಬೇಕು. ಅಲ್ಲದೆ ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇಶವ ಅಮೀನ್ ವಹಿಸಿದ್ದರು. ಮುಂಬೈ ಉದ್ಯಮಿ ಎಸ್.ಎಸ್.ಶೆಟ್ಟಿ, ಹೆಜಮಾಡಿ ಗ್ರಾ.ಪಂ.ಅಧ್ಯಕ್ಷ ಸುಭಾಷ್ ಜಿ.ಸಾಲ್ಯಾನ್, ತಾ.ಪಂ.ಸದಸ್ಯೆ ಪಾರ್ವತಿ ಬಂಗೇರ, ಪದನಿಮಿತ್ತ ಸಹಾಯಕ ಶಿಕ್ಷಣಾಧಿಕಾರಿ ಮೂರ್ತಿ ಕುಚ್ಚಿನಾಡ್, ಸಂಘದ ಉಪಾಧ್ಯಕ್ಷೆ ನಳಿಮಾಕ್ಷಿ ಉಪಸ್ಥಿತರಿದ್ದರು.
ಶಿವರಾಮ್ ಜಿ.ಅಮೀನ್ ಸ್ವಾಗತಿಸಿದರು. ಪ್ರಾಣೇಶ್ ಹೆಜ್ಮಾಡಿ ವಂದಿಸಿದರು. ಅಶೋಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
No comments:
Post a Comment