Showing posts with label ಕಾಪು. Show all posts
Showing posts with label ಕಾಪು. Show all posts

October 1, 2008

ಭಾರತೀಯ ಸಂಸ್ಕೃತಿಯ ಉಳಿವು ಅಗತ್ಯ ಯುವಜನತೆಗೆ ಮೆಂಡನ್‌ ಕರೆ


ಪಡುಬಿದ್ರಿ: ಹಿರಿಯರು ಉಳಿಸಿಕೊಂಡು ಬಂದ ಸಂಸ್ಕೃತಿಯನ್ನು ಯುವಜನತೆ ಉಳಿಸಬೇಕು ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಕರೆ ನೀಡಿದ್ದಾರೆ.
ಅವರು ಹೆಜಮಾಡಿ ಕೋಡಿಯ ಗಾಂಧಿನಗರ ಯುವಕ, ಯುವತಿ ವೃಂದದ  ವತಿಯಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಸಂಸ್ಕೃತಿ-ಸ್ಪುರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಈಚಿನ ದಿನಗಳಲ್ಲಿ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದರಿಂದ ಭಾರತೀಯ ಸಂಸ್ಕೃತಿಯ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಉಳಿವು ಅಗತ್ಯ. ಯವಜನತೆ ಈ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗ ಬೇಕು. ಅಲ್ಲದೆ ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಕೇಶವ ಅಮೀನ್ ವಹಿಸಿದ್ದರು. ಮುಂಬೈ ಉದ್ಯಮಿ ಎಸ್.ಎಸ್.ಶೆಟ್ಟಿ, ಹೆಜಮಾಡಿ ಗ್ರಾ.ಪಂ.ಅಧ್ಯಕ್ಷ ಸುಭಾಷ್ ಜಿ.ಸಾಲ್ಯಾನ್, ತಾ.ಪಂ.ಸದಸ್ಯೆ ಪಾರ್ವತಿ ಬಂಗೇರ, ಪದನಿಮಿತ್ತ ಸಹಾಯಕ ಶಿಕ್ಷಣಾಧಿಕಾರಿ ಮೂರ್ತಿ ಕುಚ್ಚಿನಾಡ್, ಸಂಘದ ಉಪಾಧ್ಯಕ್ಷೆ ನಳಿಮಾಕ್ಷಿ  ಉಪಸ್ಥಿತರಿದ್ದರು. 

ಶಿವರಾಮ್ ಜಿ.ಅಮೀನ್ ಸ್ವಾಗತಿಸಿದರು. ಪ್ರಾಣೇಶ್ ಹೆಜ್ಮಾಡಿ ವಂದಿಸಿದರು. ಅಶೋಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

June 24, 2008

ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ: ಮುಖ್ಯಮಂತ್ರಿ


ಕರಾವಳಿ ಪ್ರದೇಶದ ಜನತೆ ತಮ್ಮ ಸರಕಾರದ ಮೇಲೆ ದೊಡ್ಡ ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಭರವಸೆ ನೀಡಿದ್ದಾರೆ.

‘ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಎರಡು ದಶಕಗಳ ಅವಧಿಯಲ್ಲಿ ಕರಾವಳಿ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಲ್ಲಿನ ರಸ್ತೆಗಳು ಹಾಳಾಗಿವೆ. ಕಡಲ ಕೊರೆತದಿಂದ ಜನ ತೊಂದರೆಗೆ ಒಳಗಾಗಿದ್ದಾರೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗೆ ಇರುವ ಅವಕಾಶ ವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಗಮನದ ಲ್ಲಿಟ್ಟುಕೊಂಡು ಕರಾವಳಿ ಅಭಿವೃದ್ಧಿಗೆ ಗಮನ ನೀಡುವುದಾಗಿ ತಿಳಿಸಿದರು.

ಕರಾವಳಿ ಜಿಲ್ಲೆಯ ಜನತೆ ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದ್ದಾರೆ. ಆದ್ದರಿಂದ ಅವರ ನಿರೀಕ್ಷೆಯನ್ನು ನನ್ನ ಸರಕಾರ ಸುಳ್ಳು ಮಾಡುವುದಿಲ್ಲ ಎಂದ ಯಡಿ ಯೂರಪ್ಪ, ವಿಶೇಷವಾಗಿ ಗಣಿಗಾರಿಕೆ ಲಾರಿಗಳಿಂದ ರಸ್ತೆಗಳು ಹಾಳಾಗು ವುದನ್ನು ತಪ್ಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.